Friday, August 7, 2020

Assignment 9

 ಮನೆಯಿಂದಲೇ ಕೆಲಸದಿಂದ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಂಡ ಬಗ್ಗೆ

ಕೋವಿಡ್ 19 ರೋಗದ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಆ ಮೂಲಕ ರೋಗ ಮತ್ತೊಬ್ಬರಿಗೆ ಹರಡದಂತೆ ಅಥವಾ ಮತ್ತೊಬ್ಬರಿಂದ ನಮಗೆ ರೋಗ ಬರದಂತೆ ನೋಡಿಕೊಳ್ಳುವುದು ತುಂಬಾ ಅವಶ್ಯಕವಾಗಿದೆಈ ಒಂದು ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಶಾಲೆಗೆ ಹೋಗಿ ಕಾರ್ಯನಿರ್ವಹಿಸುವುದು ಸಾಧ್ಯವಿರದ ಇರುವ ಕಾರಣ ಮತ್ತು ಶಾಲೆಗೆ ಮಕ್ಕಳು ಬರಲು ಇನ್ನು ಸಮಯಾವಕಾಶ ಇರುವ ಕಾರಣದಿಂದ ನಾವು ಶಾಲಾ ಕೆಲಸ ಕಾರ್ಯಗಳನ್ನು ಮನೆಯಿಂದಲೇ ನಿರ್ವಹಿಸಬೇಕಾಗಿದೆ.    ಮನೆಯಿಂದಲೇ ಕಾರ್ಯನಿರ್ವಹಿಸಿ ಈ ಕೆಳಕಂಡಂತೆ ನನ್ನ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಯಿತು ಎಂದು ಹೇಳಬಹುದು

  1. ಇಂದಿನ ಆಧುನಿಕ ಸಂವಹನ ಯುಗದಲ್ಲಿ ಕೇವಲ ತರಗತಿ ಕೋಣೆಯಲ್ಲಿ ತಂತ್ರಜ್ಞಾನ ರಹಿತವಾಗಿ ಪಾಠ ಮಾಡುವುದು ಮಾತ್ರವಲ್ಲ ಬದಲಾಗಿ ತಂತ್ರಜ್ಞಾನವನ್ನು ಬಳಸಿ ಆನ್ಲೈನ್ ಮೂಲಕ ಹೇಗೆ ಶಿಕ್ಷಣವನ್ನು ಮಕ್ಕಳಿಗೆ ನೀಡಬಹುದು ಎಂಬುದನ್ನು ತಿಳಿದುಕೊಳ್ಳಲು ಸಹಾಯಕವಾಯಿತು.
  2. ಒಬ್ಬ ಶಿಕ್ಷಕನಿಗೆ ಕೇವಲ ಶಾಲಾ ಪಠ್ಯಪುಸ್ತಕಗಳ ಜ್ಞಾನವಿದ್ದರೆ ಮಾತ್ರ ಸಾಲದು ಅದನ್ನು ಹೊರತುಪಡಿಸಿ ಹೊರಪ್ರಪಂಚದ ಸಾಕಷ್ಟು ತಿಳುವಳಿಕೆ ಪಡೆದುಕೊಳ್ಳುವುದು ತುಂಬಾ ಅವಶ್ಯಕವಾಗಿದೆ ಅದರೊಂದಿಗೆ ವಿಮರ್ಶಾ ಕೌಶಲ ವೃತ್ತಿ ಕೌಶಲ್ಯ ಹೆಚ್ಚಿಸಿಕೊಳ್ಳುವುದು ತುಂಬಾ ಅವಶ್ಯಕ ಅದನ್ನು ಅನೇಕ ಪುಸ್ತಕಗಳಿಂದ ಓದಿ ಹೆಚ್ಚಿಸಿಕೊಳ್ಳಲು ಅನುಕೂಲವಾಯಿತು.
  3. ಶಾಲಾ ಶಿಕ್ಷಣಕ್ಕೆ ಪೂರಕವಾಗಿರುವ ದೀಕ್ಷಾ ಯಾಪ್ ಯೂಟ್ಯೂಬ್ ಮೇಘಶಾಲಾ ಮುಂತಾದ ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡೆವು
  4. ಬೇರೆ ಬೇರೆ ಪುಸ್ತಕಗಳನ್ನು ಓದುವ ಅವಕಾಶ ಸಿಕ್ಕಿತು ಮತ್ತು ವಿಮರ್ಶೆ ಮಾಡುವ ಅವಕಾಶ ದೊರೆಯಿತು.
  5. ಕಲಿಕಾ ಬೋಧನೆ ಪ್ರಕ್ರಿಯೆಗೆ ಪೂರಕವಾದ ಕಲಿತು ಕಲಿಕೋಪಕರಣಗಳ ನ್ನು ತಯಾರಿಸಲು ಅವಕಾಶ ದೊರೆಯಿತು.
  6. ಶಿಕ್ಷಣದ ಬಗ್ಗೆ ಲೇಖನ ಬರೆಯಲು ಆ ಮೂಲಕ ನನ್ನ ಕಲ್ಪನೆಗಳನ್ನು ಹೊರಹಾಕಲು ಅವಕಾಶ ದೊರೆಯಿತು.
ಅನೇಕ ಆನ್ಲೈನ್ ತರಬೇತಿಗಳಲ್ಲಿ ಭಾಗವಹಿಸಿ ಸಾಕಷ್ಟು ವಿಷಯ ಜ್ಞಾನವನ್ನು ಪಡೆದುಕೊಂಡೆವು ನಾನೂ ಕೂಡ ಕೆಲವು ವಿಷಯಗಳಲ್ಲಿ ಶಿಕ್ಷಕರಿಗೆ ಆನ್ಲೈನ್ ತರಬೇತಿ ನೀಡಲು ಅವಕಾಶ ದೊರೆಯಿತು ಈ ಮೂಲಕ ತರಬೇತಿಗಳನ್ನು ಹೇಗೆ ಆನ್ಲೈನ್ ಮೂಲಕ ಪಡೆಯಬಹುದು ಎಂಬುದನ್ನು ತಿಳಿದುಕೊಂಡೆವು.

ಹೀಗೆ ಇನ್ನೂ ಅನೇಕ ಸಾಕಷ್ಟು ವಿಚಾರಗಳನ್ನು ಮಾಹಿತಿಗಳನ್ನು ಮನೆಯಿಂದಲೇ ಕಾರ್ಯನಿರ್ವಹಿಸುವ ಮೂಲಕ ನನ್ನ ನೈಪುಣ್ಯತೆ ಹೆಚ್ಚಿಸಿಕೊಳ್ಳುವಲ್ಲಿ ಸಾಕಷ್ಟು ಅನುಕೂಲವಾಯಿತು ಹೇಳಬಹುದು.

Assignment 4

Tlm

Sunday, August 2, 2020

ಚಟುವಟಿಕೆ 8 ರಸಪ್ರಶ್ನೆಗಳು

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕ್ಯಾತನಾಳ ತಾಲೂಕು ಶಹಾಪುರ ಜಿಲ್ಲೆಯಾದಗಿರಿ
ಶಿಕ್ಷಕರ ಹೆಸರು: ದಿಗಂಬರಪ್ಪ ಸಹಶಿಕ್ಷಕ
ತರಗತಿ :1-3
  1. ನಮ್ಮ ಜಿಲ್ಲೆಯ ಹೆಸರೇನು
  2. ನಮ್ಮ ನಾಡಗೀತೆ ಯಾವುದು
  3.  ನಮ್ಮ ತಾಲೂಕಿನ ಹೆಸರೇನು
  4. ನಮ್ಮ ಜಿಲ್ಲೆಯಲ್ಲಿ  ಹರಿಯುವ ನದಿಗಳು ಯಾವುವು
  5. ನಮ್ಮ ಜಿಲ್ಲೆಯಲ್ಲಿ ಬೆಳೆಯುವ ಆಹಾರ ಬೆಳೆಗಳು ಯಾವುವು
  6. ನಿಮ್ಮ ಊರು ಯಾವ ಗ್ರಾಮ ಪಂಚಾಯಿತಿಗೆ ಸೇರುತ್ತದೆ
  7. ಕಾಡು ಪ್ರಾಣಿಗಳ ಹೆಸರು ಹೇಳು
  8. ಸಾಕು ಪ್ರಾಣಿಗಳ ಹೆಸರು ಹೇಳು
  9. ರಸ್ತೆ ಮೇಲೆ ಚಲಿಸುವ ವಾಹನಗಳ ಹೆಸರು ಹೇಳು
  10. ನೀರಿನ ಮೇಲೆ ಚಲಿಸುವ ವಾಹನಗಳ ಹೆಸರು ಹೇಳು
  11. ಹಸಿಯಾಗಿ ತಿನ್ನುವ ತರಕಾರಿಗಳ ಹೆಸರು ಹೇಳು 
  12. ನಿಮ್ಮ ಊರಿನಲ್ಲಿ ಬೆಳೆಯುವ ತರಕಾರಿಗಳ ಹೆಸರು ಹೇಳಿ
  13. ನೀರಿನಲ್ಲಿ ವಾಸಿಸುವ ಪ್ರಾಣಿಗಳ ಹೆಸರು ಹೇಳು
  14. ನಿನಗೆ ಗೊತ್ತಿರುವ ಪಕ್ಷಿಗಳ ಹೆಸರು ಹೇಳು
  15. ನಿನಗೆ ಗೊತ್ತಿರುವ ಪ್ರಾಣಿಗಳ ಹೆಸರು ಹೇಳಿ

5ನೇ ತರಗತಿ ಮೂಡಲ ಮನೆ ಪದ್ಯ


ವಚನದ ದೃಶ್ಯರೂಪಕ


Nalikali room


ಏಳನೇ ತರಗತಿಯ ಕನ್ನಡ ಪದ್ಯಗಳು

ಏಳನೇ ತರಗತಿಯ ಕನ್ನಡ ಪದ್ಯಗಳು

6ನೇ ತರಗತಿಯ ಕನ್ನಡ ಪದ್ಯಗಳು


ತಲಕಾಡಿನ ವೈಭವ ಎಂಟನೇ ತರಗತಿ ಕನ್ನಡ ಪಾಠ


Kannada writings


Nalikali English


FLN Evaluation

 ಮಗುವಿನ ಕಲಿಕೆಯನ್ನು ದರ್ಜಾಮಾಪನ ತಾಳೆಪಟ್ಟಿ ವೀಕ್ಷಣೆ ಚರ್ಚೆ ಕಾರ್ಯನಿರ್ವಹಣೆ ವರ್ಗೀಕರಿಸುವುದು ಮುಂತಾದ ತಂತ್ರಗಳ ಮೂಲಕ ಮೌಲ್ಯಮಾಪನ ಮಾಡುತ್ತೇವೆ