ಮನೆಯಿಂದಲೇ ಕೆಲಸದಿಂದ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಂಡ ಬಗ್ಗೆ
ಕೋವಿಡ್ 19 ರೋಗದ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಆ ಮೂಲಕ ರೋಗ ಮತ್ತೊಬ್ಬರಿಗೆ ಹರಡದಂತೆ ಅಥವಾ ಮತ್ತೊಬ್ಬರಿಂದ ನಮಗೆ ರೋಗ ಬರದಂತೆ ನೋಡಿಕೊಳ್ಳುವುದು ತುಂಬಾ ಅವಶ್ಯಕವಾಗಿದೆಈ ಒಂದು ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಶಾಲೆಗೆ ಹೋಗಿ ಕಾರ್ಯನಿರ್ವಹಿಸುವುದು ಸಾಧ್ಯವಿರದ ಇರುವ ಕಾರಣ ಮತ್ತು ಶಾಲೆಗೆ ಮಕ್ಕಳು ಬರಲು ಇನ್ನು ಸಮಯಾವಕಾಶ ಇರುವ ಕಾರಣದಿಂದ ನಾವು ಶಾಲಾ ಕೆಲಸ ಕಾರ್ಯಗಳನ್ನು ಮನೆಯಿಂದಲೇ ನಿರ್ವಹಿಸಬೇಕಾಗಿದೆ. ಮನೆಯಿಂದಲೇ ಕಾರ್ಯನಿರ್ವಹಿಸಿ ಈ ಕೆಳಕಂಡಂತೆ ನನ್ನ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಯಿತು ಎಂದು ಹೇಳಬಹುದು
- ಇಂದಿನ ಆಧುನಿಕ ಸಂವಹನ ಯುಗದಲ್ಲಿ ಕೇವಲ ತರಗತಿ ಕೋಣೆಯಲ್ಲಿ ತಂತ್ರಜ್ಞಾನ ರಹಿತವಾಗಿ ಪಾಠ ಮಾಡುವುದು ಮಾತ್ರವಲ್ಲ ಬದಲಾಗಿ ತಂತ್ರಜ್ಞಾನವನ್ನು ಬಳಸಿ ಆನ್ಲೈನ್ ಮೂಲಕ ಹೇಗೆ ಶಿಕ್ಷಣವನ್ನು ಮಕ್ಕಳಿಗೆ ನೀಡಬಹುದು ಎಂಬುದನ್ನು ತಿಳಿದುಕೊಳ್ಳಲು ಸಹಾಯಕವಾಯಿತು.
- ಒಬ್ಬ ಶಿಕ್ಷಕನಿಗೆ ಕೇವಲ ಶಾಲಾ ಪಠ್ಯಪುಸ್ತಕಗಳ ಜ್ಞಾನವಿದ್ದರೆ ಮಾತ್ರ ಸಾಲದು ಅದನ್ನು ಹೊರತುಪಡಿಸಿ ಹೊರಪ್ರಪಂಚದ ಸಾಕಷ್ಟು ತಿಳುವಳಿಕೆ ಪಡೆದುಕೊಳ್ಳುವುದು ತುಂಬಾ ಅವಶ್ಯಕವಾಗಿದೆ ಅದರೊಂದಿಗೆ ವಿಮರ್ಶಾ ಕೌಶಲ ವೃತ್ತಿ ಕೌಶಲ್ಯ ಹೆಚ್ಚಿಸಿಕೊಳ್ಳುವುದು ತುಂಬಾ ಅವಶ್ಯಕ ಅದನ್ನು ಅನೇಕ ಪುಸ್ತಕಗಳಿಂದ ಓದಿ ಹೆಚ್ಚಿಸಿಕೊಳ್ಳಲು ಅನುಕೂಲವಾಯಿತು.
- ಶಾಲಾ ಶಿಕ್ಷಣಕ್ಕೆ ಪೂರಕವಾಗಿರುವ ದೀಕ್ಷಾ ಯಾಪ್ ಯೂಟ್ಯೂಬ್ ಮೇಘಶಾಲಾ ಮುಂತಾದ ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡೆವು
- ಬೇರೆ ಬೇರೆ ಪುಸ್ತಕಗಳನ್ನು ಓದುವ ಅವಕಾಶ ಸಿಕ್ಕಿತು ಮತ್ತು ವಿಮರ್ಶೆ ಮಾಡುವ ಅವಕಾಶ ದೊರೆಯಿತು.
- ಕಲಿಕಾ ಬೋಧನೆ ಪ್ರಕ್ರಿಯೆಗೆ ಪೂರಕವಾದ ಕಲಿತು ಕಲಿಕೋಪಕರಣಗಳ ನ್ನು ತಯಾರಿಸಲು ಅವಕಾಶ ದೊರೆಯಿತು.
- ಶಿಕ್ಷಣದ ಬಗ್ಗೆ ಲೇಖನ ಬರೆಯಲು ಆ ಮೂಲಕ ನನ್ನ ಕಲ್ಪನೆಗಳನ್ನು ಹೊರಹಾಕಲು ಅವಕಾಶ ದೊರೆಯಿತು.
ಹೀಗೆ ಇನ್ನೂ ಅನೇಕ ಸಾಕಷ್ಟು ವಿಚಾರಗಳನ್ನು ಮಾಹಿತಿಗಳನ್ನು ಮನೆಯಿಂದಲೇ ಕಾರ್ಯನಿರ್ವಹಿಸುವ ಮೂಲಕ ನನ್ನ ನೈಪುಣ್ಯತೆ ಹೆಚ್ಚಿಸಿಕೊಳ್ಳುವಲ್ಲಿ ಸಾಕಷ್ಟು ಅನುಕೂಲವಾಯಿತು ಹೇಳಬಹುದು.
No comments:
Post a Comment